Home » DRDO Recruitment 2022

DRDO Recruitment 2022

by Koustubh Verma

DRDO Recruitment 2022: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ( Defence Research and Development Organisation) ಕನ್ಸಲ್ಟೆಂಟ್ (Consultant ​) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಆರ್​ಡಿಒನ ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್​ನಲ್ಲಿ (Centre for Air Borne Systems) ಈ ನೇಮಕಾತಿ ನಡೆಯಲಿದೆ. ಈಗಾಗಲೇ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 14 ಆಗಿದೆ.

 

ಈ ಹುದ್ದೆಗಳನ್ನು ತಾತ್ಕಾಲಿಕವಾಗಿದ್ದು, ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆ ಮಾಹಿತಿ ಹುದ್ದೆ ವಿವರ

ಸಂಸ್ಥೆಯ ಹೆಸರು ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ (DRDO)

ಹುದ್ದೆಯ ಹೆಸರು ಸಲಹೆಗಾರ

ಹುದ್ದೆಗಳ ಸಂಖ್ಯೆ 6

ಉದ್ಯೋಗ ಸ್ಥಳ ಬೆಂಗಳೂರು

ಸಂಬಳ 30000-60000 ರೂ ಮಾಸಿಕ

 

ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಬಿಇ ಅಥವಾ ಬಿಟೆಕ್​​, ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.

 

 

ಇದನ್ನು ಓದಿ: 250 ಪಶು ವೈದ್ಯಕೀಯ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಹುದ್ದೆ ಮಾಹಿತಿ

 

 

ವಯಸ್ಸಿನ ಮಿತಿ: ಸೆಂಟರ್ ಫಾರ್ ಏರ್ ಬೋರ್ನ್ ಸಿಸ್ಟಮ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 63 ವರ್ಷಗಳು ಮೀರಿರಬಾರದು.

 

ವಯೋಮಿತಿ ಸಡಿಲಿಕೆ:

ಏರ್ ಬೋರ್ನ್ ಸಿಸ್ಟಮ್ಸ್ ನಿಯಮಗಳಗ ಪ್ರಕಾರ

 

ಅರ್ಜಿ ಸಲ್ಲಿಕೆ: ಆಫ್​ಲೈನ್​​

 

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

 

 

ಇದನ್ನು ಓದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿದೆ ಹುದ್ದೆ; ಸಿವಿಲ್​ ಇಂಜಿನಿಯರ್​ ಆದವರಿಗೆ ಅವಕಾಶ

 

 

ಅರ್ಜಿ ಸಲ್ಲಿಸುವ ವಿಳಾಸ

ನಿರ್ದೇಶಕರು, ವಾಯುಗಾಮಿ ವ್ಯವಸ್ಥೆಗಳ ಕೇಂದ್ರ (CABS), ಬೇಲೂರು, ಯೆಮ್ಲೂರು ಅಂಚೆ, ಬೆಂಗಳೂರು-560037

 

 

ಪ್ರಮುಖ ದಿನಾಂಕಗಳು:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಸೆಪ್ಟೆಂಬರ್​​ 2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಅಕ್ಟೋಬರ್ 2022

 

 

 ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: drdo.gov.in

 

ಅರ್ಜಿ ಸಲ್ಲಿಕೆ ವಿಧಾನ

ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

 

 

ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ

 

 

ಅರ್ಜಿ ಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

 

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಿ

 

➠ ನನ್ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ 

 

 

⭕️ ಹೆಚ್ಚಿನ ಉದ್ಯೋಗ ಮಾಹಿತಿಯನ್ನು ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:

 ➠ ನನ್ನ ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ತಿಳಿದುಕೊಳ್ಳಿ 

 

 

 

⭕️ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ವಾಟ್ಸಪ್ಪ್ ಗ್ರೂಪಗೆ ಜಾಯಿನ್ ಆಗಿ :~

ನನ್ನ ಮೇಲೆ ಕ್ಲಿಕ್ ಮಾಡಿ ಮತ್ತು ಜಾಯಿನ್ ಆಗಿ

 

 

⭕️ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಜಾಯಿನ್ ಆಗಿ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ :~

➠ ನನ್ನ ಮೇಲೆ ಕ್ಲಿಕ್ ಮಾಡಿ ಮತ್ತು ಜಾಯಿನ್ ಆಗಿ

 

PUBLISHED BY: NP SARKAR 

Leave a Comment